ಛೋಲೆ ಭಟೂರೆ ಚನಾ ಮಸಾಲಾ (ಖಾರದ ಬಿಳಿ ಕಡಲೆ) ಮತ್ತು ಭಟೂರಾ (ಮೈದಾದಿಂದ ತಯಾರಿಸಲಾದ ಕರಿದ ಪೂರಿಯಂಥ ಖಾದ್ಯ) ಸಂಯೋಜನೆಯಾದ ಪಂಜಾಬಿ ಪಾಕಪದ್ಧತಿಯ ಒಂದು ಖಾದ್ಯ/ಭಕ್ಷ್ಯ. ಛೋಲೆ ಭಟೂರೆಯನ್ನು ಹಲವುವೇಳೆ ಬೆಳಿಗ್ಗೆ ತಿಂಡಿಯಾಗಿ ತಿನ್ನಲಾಗುತ್ತದೆ, ಕೆಲವೊಮ್ಮೆ ಲಸ್ಸಿಯ ಜತೆಗೂಡಿಯೂ ತಿನ್ನಲ್ಪಡುತ್ತದೆ. ಆದರೆ ಇದು ಬೀದಿ ಆಹಾರವಾಗಿಯೂ ಇರಬಹುದು ಅಥವಾ ಸಂಪೂರ್ಣ ಊಟವಾಗಿಯೂ ಇರಬಹುದು, ಮತ್ತು ಜೊತೆಗೆ, ಉದಾಹರಣೆಗೆ, ಈರುಳ್ಳಿ ಚೂರುಗಳು, ಗಜ್ಜರಿ ಉಪ್ಪಿನಕಾಯಿ, ಹಸಿರು ಚಟ್ನಿ ಮತ್ತು ಉಪ್ಪಿನಕಾಯಿಯನ್ನೂ ಬಡಿಸಬಹುದು. == ಉಲ್ಲೇಖಗಳು ==